ಸಂಧಿ ರಚನೆಯಲ್ಲಿ 'ಯ' 'ವ' 'ರ' ಈ ಅಕ್ಷರಗಳು ಆದೇಶವಾಗಿ ಬಂದರೆ ಯಣ್ ಸಂಧಿ ಎನ್ನುತ್ತೇವೆ. ಮತ್ತು ಇ,ಈ,ಉ,ಊ,ಋ ಕಾರಗಳಿಗೆ ಸವರ್ಣವಲ್ಲದ ಸ್ವರ ಪರವಾದರೆ ಇ ಈ ಕಾರಗಳಿಗೆ 'ಯ್'ಕಾರವೂ, ಉ ಊಕಾರಗಳಿಗೆ 'ವ್'ಕಾರವೂ, ಋಕಾರಕ್ಕೆ 'ರ್'(ರೇಫ)ವೂ ಆದೇಶವಾಗಿ ಬರುತ್ತದೆ. ಇದಕ್ಕೆ ನಾವು 'ಯಣ್ ಸಂಧಿ'ಎನ್ನುತ್ತೇವೆ. ನಿಯಮ :- ಇ,ಈ + (ಸವರ್ಣವಲ್ಲದ ಸ್ವರ) = ಯ್ ಉ,ಊ + (ಸವರ್ಣವಲ್ಲದ ಸ್ವರ) = ವ್ ಋ + (ಸವರ್ಣವಲ್ಲದ ಸ್ವರ) = ರ್ ಉದಾಹರಣೆ :- ಅತಿ + ಅಂತ = ಅತ್ಯಂತ ಅತಿ + ಅವಸರ = ಅತ್ಯವಸರ ಜಾತಿ + ಅತೀತ = ಜಾತ್ಯತೀತ ಕೋಟಿ +ಅಧಿಪತಿ =ಕೋಟ್ಯಾಧಿಪತಿ ಕೋಟಿ+ ಅಧೀಶ = ಕೋಟ್ಯಾಧೀಶ ಅತಿ + ಅವಸರ = ಅತ್ಯವಸರ ಮನು + ಅಂತರ = ಮನ್ವಂತರ ಪ್ರತಿ + ಉತ್ತರ = ಪ್ರತ್ಯುತ್ತರ